"ಭಾರತದ ಸಮಗ್ರ ಅಭಿವೃದ್ಧಿಗಾಗಿ ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನದ ಉಪಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಿವುದು ಇಸ್ರೊ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. " - ಡಾ|| ವಿಕ್ರಮ ಸಾರಾಭಾಯಿ
 
 



 

          ಗುಣಮಟ್ಟತೆಯ ಕಾರ್ಯನೀತಿ : ಅಂತರಿಕ್ಷೆ ವೆವಸ್ಠೆ ಹಾಗೂ ಸೇವೆಗಳಲ್ಲಿ ಸಂಪೂರ್ಣ ಗುಣಮಟ್ಟತೆ ಮತ್ತು ದೋಷಶೂನ್ಯತೆಗೆ ಬದ್ಧರಾಗಿದ್ದೆವೆ - ನಿರ್ದೇಶಕರು, ಯು. ಆರ್. ರಾವ್ ಉಪಗ್ರಹ ಕೇಂದ್ರ.


ಯು ಆರ್ ರಾವ್ ಉಪಗ್ರಹ ಕೇಂದ್ರವು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು ಉಪಗ್ರಹ ತಂತ್ರಜ್ಞಾನದಲ್ಲಿ ಮುಂಚುಣಿಯಲ್ಲಿರುವ ಕೇಂದ್ರ . ಎಲ್ಲ ಭಾರತೀಯ ಉಪಗ್ರಹಗಳ ವಿನ್ಯಾಸ, ತಯಾರಿಕೆ, ಜೋಡಣೆ, ಪರೀಕ್ಷಣೆ ಹಾಗೂ ಉಡಾವಾಣಾ ಪೂರ್ವ ಹಾಗೂ ಉಡಾವಣೆ ನಂತರದ ಕಾರ್ಯಯೋಜನೆಗಳು ಈ ಕೇಂದ್ರದ ಮುಖ್ಯ ಕಾರ್ಯಗಳಾಗಿವೆ.

ಇದರೊಂದಿಗೆ ನವನವೀನ ಉಪಗ್ರಹ ತಂತ್ರಜ್ಞಾನಗಳ ಕುರಿತಾಗಿ ಸಂಶೋಧನಾ ಕಾರ್ಯಕ್ರಮಗಳೂ ಈ ಕೇಂದ್ರದಲ್ಲಿ ನಡೆಯುತ್ತಿವೆ. ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉತ್ತುಂಗಕ್ಕೆರಿಸುವುದು ಈ ಸಂಸ್ಥೆಯ ಉದ್ದೇಶ.

ಇದುವರೆಗೂ 100ಕ್ಕೂ ಹೆಚ್ಚು ಉಪಗ್ರಹಗಳನ್ನು ತಯಾರಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆ, ಇವುಗಳಲ್ಲಿ ಸಂಪರ್ಕ, ದೂರಸಂವೇದಿ ಉಪಗ್ರಹಗಳಲ್ಲದೆ ವೈಜ್ಞಾನಿಕ ಪ್ರಯೋಗಗಳಿಗೆ ಮೀಸಲಾದ ಉಪಗ್ರಹಗಳೂ ಸೇರಿವೆ